ಪೋಸ್ಟ್‌ಗಳು

ಶಾಲೆಯೆಂಬ ಸ್ವರ್ಗದ ತುಣುಕು

ಇಮೇಜ್
 ಶಾಲೆಯೆಂಬ ಸ್ವರ್ಗದ ತುಣುಕು          ತುಂಗಭದ್ರೆಯನ್ನು ಅನ್ನದಾತರ ಗದ್ದೆಗಳಿಗೆ ಕರೆದುಕೊಂಡು ಸಾಗುವ ಅದೊಂದು ಪುಟ್ಟ ಕಾಲುವೆ.ಕಾಲುವೆಯ ಒಂದು ಬದಿಯಲ್ಲಿ ಹಸಿರು ಸಿರಿ ಹೊದ್ದ ಗದ್ದೆಗಳು ಮತ್ತೊಂದು ಬದಿಯಲ್ಲಿ ಬೆರಳೆಣಿಕೆಯಷ್ಟು ಗುಡಿಸಲು ಮನೆಗಳು ಹಾಗೂ ತಾತ್ಕಾಲಿಕ ಟೆಂಟ್ ಗಳು.ರಸ್ತೆಯಿಲ್ಲ, ಚರಂಡಿಯಿಲ್ಲ, ಬೀದಿದೀಪಗಳಿಲ್ಲ, ವಿದ್ಯುತ್ ಸಂಪರ್ಕವಿಲ್ಲ ಇಷ್ಟೆಲ್ಲಾ ಇಲ್ಲಗಳ ಮಧ್ಯೆ ದೂರದೂರದ ಪ್ರದೇಶಗಳಿಂದ ಹೊಟ್ಟೆ ಚೀಲ ತುಂಬಿಸಿಕೊಳ್ಳಲು ನೆಲ್ಲು ತುಂಬುವ ಕಾರ್ಖಾನೆಗಳಿಗೆ ಕೆಲಸಗಾರರಾಗಿ ಬಂದವರು ಇಲ್ಲಿನ ನಿವಾಸಿಗಳು.ನೆಲದ ಒಡೆಯನಾರೋ ತಾತ್ಕಾಲಿಕ ಟೆಂಟ್ ಹಾಗೂ ಗುಡಿಸಲುಗಳಿಗೆ ಮಾತ್ರ ಇವರು ಒಡೆಯರು.  ಯಾವ ಸೌಲಭ್ಯಗಳು ಲಭ್ಯವಿಲ್ಲದ ಇಂತಿರ್ಪ ಊರಲ್ಲದ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣೆಬರಹವೇ  ಇಲ್ಲದ ಕೂಲಿ ಕಾರ್ಮಿಕರ ಮಕ್ಕಳಿಗೆ ಬರಹ ಕಲಿಸಲು  ಎರಡು ಕೊಠಡಿಗಳ ಪುಟ್ಟ ಶಾಲೆ ಇಲ್ಲಿದೆ.ಶಾಲೆಯ ಮುಂದೆ ಕಿರುರಸ್ತೆ ಅದರಾಚೆ ಸದಾಕಾಲವೂ ತುಂಬಿ ಹರಿಯುವ ಕಾಲುವೆ.ಕಲಿಸುವುದಕ್ಕಿಂತ ಮಕ್ಕಳನ್ನು ಕಾಯುವುದೇ ಬಹುಮುಖ್ಯ ಕೆಲಸ.ಶಾಲೆಯೂ ಊರಿನಂತೆ ಸಾಕಷ್ಟು ಇಲ್ಲಗಳ ಮಧ್ಯೆಯೇ ಎದ್ದುನಿಂತ ನಾಲ್ಕು ಗೋಡೆಗಳ ಕಲ್ಲಿನ ಕಟ್ಟಡವಷ್ಟೇ.ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಇದ್ದಂತಿರುವ ಶಾಲೆಯ ರಕ್ಷಣಾ ಗೋಡೆದಾಟಿದರೆ ಗದ್ದೆ,ಗಟಾರ್ ಕಾಲುವೆಗಳ ದರ್ಶನ ಸಹಜ.       ಹೀಗೆ ಆಧುನಿಕ ಕಾಲದಲ...

ಚಂದಿರನ ಲೋಕದಲಿ

ಇಮೇಜ್
        "ಚಂದಮಾಮ ಚಂದಮಾಮ  ಓಡಿ ಬಾ       ಚಿಗರೆಯ ಮೇಲೆ ಕುಳಿತು ಬಾ       ಹಾಲನು ನಿನಗೆ ಕೊಡುವೆನು ಬಾ       ಬೆಳದಿಂಗಳ ಹಾಸಿಗೆ ಹಾಸಲು ಬಾ"       ಬಾಲಮಂದಿರದ ತರಗತಿಯೊಳಗೆ ಚಂದಿರನ ಕುರಿತು ಹೇಳಿಸಿದ ಈ ಗೀತೆಯನು ಗೋಪಿ ತಾಯಿಯ ಮುಂದೆ ಹೇಳಿ ಕುಣಿದು ತೋರಿಸಿದ. ಗೋಪಿಯ ತಾಯಿಗೆ ಮಗನ ಹಾಡು ಕೇಳಿ ಬಹಳ ಸಂತೋಷವಾಯಿತು. ಗೋಪಿಗೆ ಆಲಂಗಿಸಿಕೊಂಡು ತಿಂಡಿ ತಿನಸಿ, ಹಾಲು ಕುಡಿಸಿ  ಕಳುಹಿಸಿದಳು. ಆಟವಾಡಿ ದಣಿದು ಸಂಜೆ ಮನೆಗೆ ಬಂದ ಗೋಪಿ ಊಟ ಮಾಡಿ ಬೇಗನೆ ಮಲಗಿದನು.  ಅವನು ಮಲಗಿದ ಕೆಲವು ಸಮಯದ ನಂತರ ಕಿಡಕಿಯ ಹೊರಗಡೆಯಿಂದ ಯಾರೋ "ಗೋಪಿ ಬಾರೋ.... ಬೇಗ ಬಾ" ಎಂದು ಕರೆದಂತಾಯಿತು. ಗೋಪಿ ಕರೆ ಬಂದ ಕಡೆಗೆ ಹೋಗಿ ನೋಡಿದರೆ ಬಿಳಿಯಾದ ಉಡುಗೆ, ಬಿಳಿ ಕಿರೀಟ ಹಾಕಿಕೊಂಡು ನಿಂತ ಚಂದಮಾಮ ಕಂಡನು.      ಗೋಪಿ ಚಂದಮಾಮನ ನೋಡಿ ಖುಷಿಯಿಂದ ಕುಣಿದಾಡಿ ಅವನ ಬಳಿ ಓಡಿ ಬಂದು ನಿಂತುಕೊಂಡು "ಐಯ್.... ಚಂದಮಾಮ ನೀನು! ಭೂಮಿಗೆ ಹೇಗೆ ಬಂದೆ?" ಎಂದು ಸೋಜಿಗದಿಂದ ಕೇಳಿದಾಗ ಚಂದಮಾಮ "ಗೋಪಿ ನಾನು ನಿನಗೆ ಕರೆದುಕೊಂಡು ಹೋಗಲು ಆಗಮಿಸಿರುವೆ ಬಾ ಚಂದಿರನ ಲೋಕಕೆ ಹೋಗೋಣ" ಎಂದು ಹೇಳಿ ಗೋಪಿಯ ಕರ ಹಿಡಿದು ಚಿಗರೆಯ ರಥವನೇರಿ ಕರೆದುಕೊಂಡು ಹೊರಟನು.  ಚಿಗರೆಯ ರಥದಲಿ ಕುಳಿತಿರುವ ಗೋಪಿ ಆನಂದದಿಂದ ಓಲಾಡಿದನು. ಕೆಳಗೆ ಇಣುಕಿ ನೋಡ...

ಗೊಂಬೆಯಾಟದ ಹುಡುಗಿ

ಇಮೇಜ್
  "ಗೊಂಬೆ ನೋಡು ಗೊಂಬೆ ಚಂದ ಚಂದ ಕುಣಿಯುವ ಗೊಂಬೆ ರಾಗದಿ ಹಾಡನು ಹಾಡುವ ಗೊಂಬೆ ಅಂದದಿ ನಾಟಕವಾಡುವ ಗೊಂಬೆ ಗೊಂಬೆ ನೋಡು ಗೊಂಬೆ"      ಎಂಬ ಹಾಡಿನ ಪದ ಸರಾಗವಾಗಿ ಆರಂಭವಾಗುವ  ವೇಳೆಗೆ ಲಂಗ ದಾವಣಿ ಹಾಕಿದ ಹುಡುಗಿ ಅಡುಗೆ ಮಾಡಿದ ಡಬರಿಗಳು ಹಾಗೂ ಊಟ ಮಾಡಿದ ತಾಟುಗಳ ತೆಗೆದುಕೊಂಡು ತೊಳೆಯಲು ಅಣಿಯಾಗುವಳು.ದಿನವೂ ಅವಳಿಗೆ ಇದೊಂದೇ ಕೆಲಸ ಮಾಡಿದರೂ ಬೇಸರವಾಗದು ಏಕೆಂದರೆ ಬೇಗನೇ ಕೆಲಸ ಮುಗಿಸಿ ಗೊಂಬೆಯಾಟದ ಕುಣಿಯುವ ಗೊಂಬೆಗಳ ಮುಂದೆ ಕುಳಿತರೆ ಅವಳಿಗೆ ಹೊಸ ಲೋಕವೇ ಉದಯವಾಗುವುದು.     ಗೊಂಬೆಯಾಡಿಸುವವರ ಮಗಳು ಈ  ಹುಡುಗಿ.  ಊರಿಂದೂರಿಗೆ ಅಲೆದು ಗೊಂಬೆಯಾಡಿಸುವುದು ಅವರ ಕುಲ ಕಸಬು.ಇಡೀ ಸಂಸಾರವೇ ಒಂದು ಬಂಡಿಯ ಮೇಲೆ ಚಲಿ‌ಸಿ ಸಂಜೆಯಾದ ನಂತರ ತಲುಪಿದ ಊರಿನ ಗುಡಿ ಅಥವಾ ಶಾಲೆಗಳ ಮುಂದೆ ಬಿಡಾರ ಹೂಡಿ ಕಿರಿದಾದ ರಂಗಮಂಟಪ ಮಾಡಿಕೊಂಡು ಬಿಳಿ ಪರದೆ ಹಾಕಿ ಗೊಂಬೆಯಾಟ ಆಡಿಸುವುದು ದಿನವಹಿ ಕಾಯಕ. ಹುಡುಗಿಯ ತಂದೆ-ತಾಯಿ, ಅವಳಿಗಿಂತ ಕಿರಿಯವನಾದ ಸಹೋದರ, ಕಾಕಾ- ಕಾಕಿ, ಹಾಗೂ ಅವರ ಮಗಳು ಇದೇ ಗೊಂಬೆಯಾಟದವರ ಸಂಸಾರ. ಹುಡುಗಿಯ ತಂದೆ ಹಾಗೂ ಕಾಕಾ ಗೊಂಬೆ ಆಡಿಸುವುದರ ಜೊತೆಗೆ ಪದ ಹಾಡುವುದು ಹಾಗೂ ಸಂಭಾಷಣೆ ಹೇಳುವುದು ಮಾಡುವರು. ಹುಡುಗಿಯ ತಾಯಿ ಹಾಗೂ ಕಾಕಿ ಗೊಂಬೆಯಾಟದ ಮಹಿಳಾ ಗೊಂಬೆಗಳ ಸಂಭಾಷಣೆ ಹೇಳುವರು.     ತಾಯಿ ಹಾಗೂ ಕಾಕಿ ಬೇಗನೆ ಅಡುಗೆ ಮುಗಿಸಿದರೆ ತಂದೆ ಹಾಗೂ ಕಾಕಾ ಗೊಂಬೆ ಆಡಿ...

ಗೋಪಿಯ ಗಾಳಿಪಟ

ಇಮೇಜ್
      ಶಾಲೆಗೆ ರಜೆ ಬಂತೆಂದರೆ ಗಾಳಿಪಟ ಹಾರಿಸುವುದು ಗೋಪಿಗೆ ತುಂಬಾ ಸಂತೋಷದ ಆಟವಾಗಿದೆ. ಕಲರ್ ಕಲರ್ ಹಾಳೆಗಳ ಗಾಳಿಪಟ ತಯಾರಿಸಿಕೊಂಡು ಊರಿನ ಸಮೀಪದ ವಿಶಾಲ ಬಯಲಿನಲಿ ಗೆಳೆಯರ ಜೊತೆಗೂಡಿ ಗಾಳಿಪಟ ಹಾರಿಸುವ ಗೋಪಿಗೆ ಸಮಯದ ಪರಿವೇ ಇರದು. ಮುಂಜಾನೆ ತಿಂಡಿ ತಿಂದು ಹೊರಡುವ ಗೋಪಿ ಸಂಜೆಯವರೆಗೂ ಗಾಳಿಪಟ ಹಾರಿಸಿ ಮನೆಗೆ ಬಂದಾಗಲೇ ಅವನಿಗೆ ಹಸಿವಿನ ಅರಿವಾಗುವುದು. ಲಗುಬಗೆಯಿಂದ ಏನಾದರೂ ತಿಂದು ಗೆಳೆಯರ ಮನೆಗೆ ಹೋಗಿ ಗಾಳಿಪಟ ತಯಾರಿಸಲು ಅವರಿಗೆ ಸಹಾಯ ಮಾಡಿ ಮಲಗುವ ಸಮಯಕೆ ಮನೆಗೆ ಹಿಂದಿರುಗಿ ಬರುವನು.          ಒಂದು ದಿನ ಗೆಳೆಯರು ಕೂಡಿಕೊಂಡು ಗಾಳಿಪಟ ಹಾರಿಸುವ ಆಟದಲಿ ತೊಡಗಿರುವಾಗ ಗೋಪಿಯ ಗಾಳಿಪಟ ತುಂಬಾ ಮೇಲೆ ಹಾರುವುದನು ಕಂಡು ಅವನ ಗೆಳೆಯ ಶೀನು ಸಹಿಸಲಾರದೇ ಗೋಪಿಯ ದಾರ ಕಸಿದುಕೊಂಡು ಜೋರಾಗಿ ಎಳೆದು ಹರಿದುಹಾಕಿದನು. ಇದರಿಂದ ಗೋಪಿ ಕೋಪಿಸಿಕೊಂಡು ಅವನ ಜೊತೆ ಜಗಳವಾಡಿದನು. ಜಗಳವಾಡುವಾಗ ಗೋಪಿಯ ಅಂಗಿ ಹರಿದು ಹೋಯಿತು. ಇದರಿಂದ ಗೋಪಿಗೆ ಅವಮಾನವಾದಂತಾಗಿ ಮನೆಗೆ ಓಡಿಬಂದು ತಾಯಿಗೆ ನಡೆದ ವಿಚಾರ ತಿಳಿಸಿದನು. ತಾಯಿ ಗೋಪಿಗೆ ಸಮಾಧಾನ ಮಾಡಿ "ನೋಡು ನೀನು ಹೀಗೆ ಜಗಳ ಮಾಡುವುದಾದರೆ ನಾಳೆಯಿಂದ ಗಾಳಿಪಟ ಹಾರಿಸಲು ಹೋಗುವುದೇ ಬೇಡ" ಎಂದು ತಾಕೀತು ಮಾಡಿದರು.       ಮಾರನೇ ದಿನ ಗೋಪಿ ಗೆಳೆಯರು ಗಾಳಿಪಟ ಹಾರಿಸಲು ಗೋಪಿಯನು ಕರೆತರಲು ಅವರ ಮನೆ ಬಳಿ ಹೋದಾಗ ಗೋಪಿಯ ತಾಯಿ  ಅವರಿ...

ಹೊಸ ಅತಿಥಿ

ಇಮೇಜ್
      ಕೆಲವೇ ದಿನಗಳ ನಂತರ ಮನೆಗೆ ಹೊಸ ಅತಿಥಿ ಬರುವ ವಿಷಯ ಗೌರಿಯ ತಾಯಿ ಅವಳಿಗೆ ತಿಳಿಸಿದಾಗಿನಿಂದ  ಗೌರಿಗೆ ಖುಷಿಯೋ ಖುಷಿ.ಹೊಸ ಅತಿಥಿ  ಬರುವ ದಿನಗಳನು ಎಣಿಸುತಾ  ಗೌರಿ ಕಾತುರದಿಂದ ಕಾಯತೊಡಗಿದಳು. " ಗೌರಿ ಬೇಗ ಬಾ,  ಹೊಸ ಅತಿಥಿ ಬಂದಿದೆ ನೋಡು ಬಾ" ಎಂದು  ಗೌರಿಯ ತಾಯಿ  ಮನೆಯ ಹಿಂಬಾಗಿಲಿನಿಂದ  ಕರೆದರು.ತಾಯಿ ಕರೆಯುವುದನು ಕೇಳಿ ಲಗುಬಗೆಯಿಂದ ಹಿಂಬಾಗಿಲಿನ ಕಡೆ ಓಡಿ ಹೋಗಿ ನೋಡಿದಾಗ ಗೌರಿಯ ಒಲುಮೆಯ ಹಸು ತುಂಗಾ ಆಗ ತಾನೇ ಜನಿಸಿದ ಅದರ ಕರುವಿನ ಜೊತೆ ನಿಂತಿದೆ. ಹಸು ತುಂಗಾ ಹಾಗೂ ಅದರ ಕರು ನೋಡಿ ಗೌರಿಯ ಮುಖ ಕಮಲದಂತೆ ಅರಳಿತು. ಖುಷಿಯಿಂದ ಕುಣಿದಾಡಿದಳು. ಮನೆಯಿಂದ ಹೊರಗೆ ಬಂದು ಇಡೀ ಓಣಿಗೆ ಕೇಳಿಸುವ ಹಾಗೆ "ತುಂಗಾ ಹಸು ಕರು ಹಾಕಿದೆ" ಎಂದು ಕೂಗಿ ಕೂಗಿ ಹೇಳಿದಳು. ತುಂಗಾ ಹಸು ಕರು ಹಾಕಿರುವ ವಿಷಯ ಕೇಳಿ ನೆರೆಹೊರೆಯವರೂ ಆನಂದಿತರಾದರು.         ತುಂಗಾ ತುಂಬಾ ವಿಶೇಷವಾದ ಹಸು. ಒಂದು ದಿನ ಸಂಜೆ ಗೌರಿಯ ತಂದೆ ಹಾಗೂ ಗೌರಿ ಹೊಲದಿಂದ  ಮರಳಿ ಬರುವಾಗ ಕೆರೆಯ ಮೇಲಿರುವ  ಪೊದೆಗಳಿಂದ ಏನೋ ಮಿಸಿಕಿದಂತಾಯಿತು. ಗೌರಿಯ ತಂದೆ ಸಮೀಪ ಹೋಗಿ ನೋಡಿದಾಗ ಒಂದು ಪುಟಾಣಿ ಆಕಳ ಕರು ಹೊರಬರಲಾಗದೆ ಕುಳಿತಿದೆ. ಗೌರಿಯ ತಂದೆ ನಿಧಾನವಾಗಿ ಪೊದೆಗಳನ್ನು ಸರಸಿ ಕರು ಹೊರಗೆ  ತೆಗೆದುಕೊಂಡು ಬಂದು ಊರಿನವರಿಗೆ ಕೇಳಿದಾಗ ಆ ಕರುವಿನ ವಾರಸುದಾರರು ಸಿಗದೇ ಹೋ...

ಹುಣಸೆ ಚಿಗಳೆ.

ಇಮೇಜ್
       ರೇಖಾ, ಫಾತಿಮಾ, ಸರೋಜಾ ಹಾಗೂ ಜಾನು ಇವರು ಐದನೇ ತರಗತಿ ಓದುವ ಗೆಳತಿಯರು. ಇವರ ಮನೆಗಳು ಆಜುಬಾಜು ಇರುವುದರಿಂದ ಯಾವಾಗಲೂ ಒಂದುಗೂಡಿಯೇ ಶಾಲೆಗೆ ಬರುವುದು ಹೋಗುವುದು ಮಾಡುವರು. ಹಾಗೆಯೇ ತರಗತಿಯೊಳಗೂ, ತಿಂಡಿ, ಊಟದ ಸಮಯದೊಳಗೂ ಒಂದುಗೂಡಿಯೇ ಇರುವರು. ಒಂದು ಶನಿವಾರ ಶಾಲೆ ಒಳಗೆ ತಿಂಡಿ ಸೇವಿಸುತಾ ರೇಖಾ ಗೆಳತಿಯರನು ಕುರಿತು "ಫಾತಿಮಾ ನಾಳೆ ರವಿವಾರ ಕಣೇ ಏನು ಮಾಡೋಣ....."? ಎಂದು ಕೇಳಿದಳು. ಫಾತಿಮಾ "ಹೂಂ ಕಣೆ ನಂದು ಅದೇ ಯೋಚನೆ. ಲೇ.. ಸರೂ ನೀನೆ ಹೇಳು ಏನು ಮಾಡೋಣ"? ಎಂದು ಸರೋಜಳಿಗೆ ಒಂದು ತಿವಿದಳು. ಸರೋಜಾ "ತಿವಿಯಬೇಡವೇ ಹಾಗೆ ಕೇಳು" ಎಂದು ಕೋಪಿಸಿಕೊಂಡು ಕುಳಿತಳು. ಜಾನು ಸರೋಜಳಿಗೆ ಸಮಾಧಾನಪಡಿಸಿ "ನೋಡಿ ನಾಳೆ ನಾವು ಕೆರೆ ದಂಡೆಗೆ ಹೋಗೋಣ ಓಕೆ ನಾ.." ಎಂದು ಗೆಳತಿಯರಿಗೆ ಹೇಳಿದಳು. ಫಾತಿಮಾ "ಕೆರೆ ದಂಡೆನಾ.... ವಾರ ವಾರ ಕೆರೆ ದಂಡೆಗೆ ಹೋಗುವುದು ಬೇಜಾರು... ಬೇಡ ಬೇಡ ಬೇರೆ ಕಡೆ ಹೋಗೋಣ" ಎಂದು ಮುಖ ಸಿಂಡರಿಸಿದಳು.ಜಾನು "ಹೌದು ವಾರ ವಾರ ಕೆರೆ ದಂಡೆಗೆ ಆಟವಾಡಲುಹೋಗುವುದು ನಿಜ ಆದರೆ ಈ ಬಾರಿ ವಿಶೇಷವಾಗಿ ಏನಾದರೂ ಮಾಡೋಣ" ಎಂದು ಹೇಳಿ ರೇಖಾಳ ಮುಖ ನೋಡಿದಳು. ರೇಖಾ ಕೊಂಚ ನಿಮಿಷ ಯೋಚಿಸಿ "ಜಾನಿ ಹೇಳೋದು ಸರಿ ಇದೆ. ನಾವು ಈ ಬಾರಿ ಕೆರೆಗೆ ದಂಡೆಗೆ ಹೋಗಿ ಹುಣಸೆ ಚಿಗಳೆ ಮಾಡೋಣ" ಎಂದು ಖುಷಿಯಿಂದ ಹೇಳಿದಳು. ರೇಖಾ ಹುಣಸೆ ಚಿಗಳೆ ಎಂದಕೂಡಲೇ...

ಕಿಲಾಡಿ ಕೋತಿಮರಿ

ಇಮೇಜ್
        ಅದೊಂದು ಸುಂದರವಾದ ಕಾಡು, ಕಾಡಿನ ನಡುವೆ ಜುಳುಜುಳನೇ ಹರಿಯುವ ತೊರೆ, ತೊರೆಯ ದಂಡೆಯ ಮೇಲೆ ಬೆಳೆದು ನಿಂತಿರುವ ಸದಾ ಹಸಿರಿನಿಂದ ಕೂಡಿದ ವಿಶಾಲವಾದ ಮರಗಳು, ಹೂವಿನ ಭಾರದಿಂದ ತೂಗಾಡುವ ಚಂದದ ಹೂಗಿಡಗಳು, ಮರಗಿಡಗಳನು ಬಳಸಿ ನಿಂತ ಲತೆಗಳು, ಹೂವಿನ ಮಕರಂದ ಹೀರಲು ತಾ ಮುಂದು ತಾ ಮುಂದು ಎಂದು ಸಿಂಗಾರದಿಂದ ಹಾರುವ ದುಂಬಿಗಳು.   ದಂಡೆಯ ಮೇಲಿರುವ ಅತಿ ವಿಶಾಲವಾದ ಮರದ ಮೇಲೆ ಒಂದು ಕೋತಿ ಹಾಗೂ ಅದರ ಮರಿ ವಾಸವಾಗಿವೆ. ಕೋತಿಯ ಮರಿ ಬಲು ಕಿಲಾಡಿ. ತಾಯಿ ಬೇಡವೆಂದರೂ ಮರದಿಂದ ಕೆಳಗೆ ಇಳಿಯುವುದು, ತೊರೆಯ ಬಳಿ ಹೋಗುವುದು, ಹೂ ಕೀಳುವುದು,ದುಂಬಿ ಓಡಿಸುವುದು ಇವೇ ಮುಂತಾದ ಕೀಟಲೆಗಳು. ತಾಯಿ ಕೋತಿಗೆ ಮರಿ ಕೋತಿಯನು ಕಾಯುವುದೇ ಒಂದು ಕೆಲಸ. ಆ ತೊರೆಗೆ ನೀರು ಕುಡಿಯಲು ಹುಲಿ, ಸಿಂಹ, ಚಿರತೆ, ಆನೆ, ತೋಳಗಳೂ ಬರುವುದರಿಂದ ತಾಯಿ ಕೋತಿಗೆ ಬಹಳ ಚಿಂತೆ. ತಾಯಿ ಕೋತಿ ಮರಿ ಕೋತಿಗೆ ಏನು ಹೇಳಿದರೂ ಕೇಳದೆ ಅದೇ ತೊರೆಯ ಬಳಿ ಹೋಗಿ ಆಟವಾಡುವುದು.         ಹೀಗೆ ಒಂದು ದಿನ ಕಿಲಾಡಿ ಕೋತಿಮರಿ ತೊರೆಯ ಬಳಿ ಕುಳಿತಿರುವಾಗ ನೀರು ಕುಡಿಯಲು ಬಂದ ಆನೆಯ ಮರಿಯೊಂದು ಭೇಟಿಯಾಯಿತು. ಆನೆಮರಿ "ಹಲೋ ಗೆಳೆಯಾ.. ನಾನು ನಿನಗೆ ಕಾಡಿನ ವಿಹಾರ ಮಾಡಿಸುವೆ ಬರುವೆಯಾ" ಎಂದು ಕೇಳಿತು. ಕೋತಿಮರಿ ಆನೆಮರಿಯ ಮಾತು ಕೇಳಿ "ಬೇಡ ಬೇಡ ನನಗೆ ಭಯ ಆಗುವುದು" ಎಂದು ಹೇಳಿದಾಗ ಆನೆ ಮರಿ  "ಭಯ ಬೇಡ ಗೆಳೆಯಾ..  ಬಾ ಮೇಲೆ...